Wednesday, April 15, 2020

ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ಪ್ರಬಂಧ ಸ್ಪರ್ಧೆ:

ಕೈರಂಗಳ: ಲಾಕ್ ಡೌನ್ ಸಮಯಗಳ ಸದುಪಯೋಗ ಗುರಿಯಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಮೋಂಟುಗೋಳಿ ಸೆಕ್ಟರ್ ನ ವತಿಯಿಂದ ಮರ್ಹೂಮ್ ಸಿರಾಜುದ್ದೀನ್ ಪಡಿಕ್ಕಲ್ ಸ್ಮರಣಾರ್ಥ  ಆನ್’ಲೈನ್ ನಲ್ಲಿ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.

ಸೆಕ್ಟರ್ ವ್ಯಾಪ್ತಿಯ ಎಂಟು ಯುನಿಟ್ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಸ್ಪರ್ಧೆಯಲ್ಲಿ ಭಾಗವಹಿಸಿದರು. ಸ್ಪರ್ಧೆಯ ಫಲಿತಾಂಶವನ್ನು ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷ  ಮನ್ಸೂರ್ ಹಿಮಾಮಿ ಮೊಂಟೆಪದವು ಘೋಷಿಸಿದರು.

ಕನ್ನಡ ಪ್ರಬಂಧದಲ್ಲಿ ಮೋಂಟುಗೋಳಿ ಶಾಖೆಯ ಕಲಂದರ್ ಮೋಂಟುಗೋಳಿ ಪ್ರಥಮ ಮತ್ತು ಮಹಮ್ಮದ್ ರಫೀಕ್ ಮೋಂಟುಗೋಳಿ ದ್ವಿತೀಯ ಸ್ಥಾನ ಪಡೆದರು.
ಇಂಗ್ಲಿಷ್ ಪ್ರಬಂಧದಲ್ಲಿ ಮೊಂಟೆಪದವು ಶಾಖೆಯ ತಹ್ಸೀನ್ ಮೊಂಟೆಪದವು ಪ್ರಥಮ ಸ್ಥಾನ ಹಾಗೂ ಮರಿಕ್ಕಲ ಶಾಖೆಯ ಯಾಝೀದ್ ಮರಿಕ್ಕಲ ದ್ವಿತೀಯ ಸ್ಥಾನ ಪಡೆದ ವಿಜೇತರು ಹಾಗೂ ಸ್ಪರ್ಧಾರ್ಥಿಗಳನ್ನು ಮೋಂಟುಗೋಳಿ ಸೆಕ್ಟರ್ ಪದಾಧಿಕಾರಿಗಳು ಅಭಿನಂಧಿಸಿದರು.

ಮಹಮ್ಮದ್ ನಿಯಾಝ್ ಪಡಿಕ್ಕಲ್ , ಸಮದ್ ಮೊಂಟೆಪದವು , ಮಹಮ್ಮದ್ ಸಿನಾನ್ ಸುಟ್ಟ ನಿರ್ವಹಣೆ ಮಾಡಿದರು.