Sunday, March 5, 2017

ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್: ತಖ್ವಿಯ್ಯಾ ಟಾಪ್ 10 ಲೀಡರ್ಸ್ ಕ್ಯಾಂಪ್

ಮೊಂಟೆಪದವು : ಎಸ್ಸೆಸ್ಸೆಫ್ ಮೊಂಟುಗೋಳಿ ಸೆಕ್ಟರ್ ವತಿಯಿಂದ *Top 10 Unit Leaders Camp (ತಖ್ವಿಯ್ಯಾ)* ಎಸ್ಸೆಸ್ಸೆಫ್ ಮರಿಕ್ಕಳ ಶಾಖಾ ಕಛೇರಿಯಲ್ಲಿ 03-03-2017. ಸೆಕ್ಟರ್ ಅಧ್ಯಕ್ಷರಾದ *ಮನ್ಸೂರ್ ಹಿಮಮಿ ಮೊಂಟೆಪದವು* ಸಂಜೆ 06:00ಗಂಟೆಗೆ ದ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಗ್ರಿಬ್ ನಮಾಜಿನ ಬಳಿಕ *ಝೈನುಲ್ ಆಬಿದ್ ಸಖಾಫಿ* (ಸದರ್ ಉಸ್ತಾದ್ ಮರಿಕ್ಕಳ) ಮರಿಕ್ಕಳ ಖಬರ್ ಝಿಯಾರತ್ ಗೆ ನೇತೃತ್ವ ನಿಡಿದರು. *ಮರಿಕ್ಕಳ ಶಾಖಾ ಕಾರ್ಯದರ್ಶಿ ಶಫೀಕ್ ಮೊಂಟುಗೋಳಿ* ಖಿರಾಅತ್ ಪಠಿಸಿದರು ,ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರು ಯುವ ವಿದ್ವಾಂಸರು *ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ* ಸಭೆಯನ್ನು ಉದ್ಘಾಟಿಸಿದರು. ಕೇರಳ ಮುಸ್ಲಿಂ ಜಮಾಅತ್ ಕಾಸರಗೊಡು ಜಿಲ್ಲಾ ಕಾರ್ಯದರ್ಶಿ *ಸುಲೈಮಾನ್ ಮುಸ್ಲಿಯಾರ್ ಕರಿವಲ್ಲೂರ್* "" ಸಮಸ್ತ ವಿಶದೀಕರಣ"" ಎಂಬ ವಿಷಯದಲ್ಲಿ ಮೊದಲ ತರಗತಿಯನ್ನು ಮಂಡಿಸಿದರು, ದ್ವಿತೀಯ ತರಗತಿಯನ್ನು *ಕೆ.ಎಮ್ ಅಬ್ದುಲ್ ರಹಿಮಾನ್ ಕಲತ್ತೂರ್* (ಮಝವಿಲ್ ಕನ್ವಿನರ್ ಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲೆ) "ಸಂಘಟನೆ" ಎಂಬ ವಿಷಯದಲ್ಲಿ ತರಗತಿ ನಡೆಸಿದರು. SSF ಉಳ್ಳಾಲ ಡಿವಿಷನ್ ಉಪಾಧ್ಯಕ್ಷರೂ ಮೊಂಟುಗೋಳಿ ಸೆಕ್ಟರ್ ಉಸ್ತುವಾರಿಯಾಗಿ ಆಯ್ಕೆಯಾದ *ಪಾರೂಕ್ ಸಖಾಫಿ ಮದನಿ ನಗರ* ಇವರನ್ನು ಸನ್ಮಾನಿಸಲಾಯಿತು,, ದ.ಕ.ಜಿಲ್ಲಾ ಕ್ಯಾಂಪಸ್ ಪ್ರ.ಕಾರ್ಯದರ್ಶಿ *ಇಸ್ಮಾಯಿಲ್* *ಮಾಸ್ಟರ್* *ಮರಿಕ್ಕಳ* ಪ್ರಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ಮುಡಿಪು, ಎಸ್ ವೈ ಎಸ್ ಮೊಂಟೆಪದವು ಬ್ರಾಂಚ್ ಕೋಶಾಧಿಕಾರಿ ಖಾಲಿದ್ ಹಾಜಿ ಭಟ್ಕಳ್, SSF ಮೊಂಟುಗೋಳಿ ಸೆಕ್ಟರ್ ಉಪಾಧ್ಯಕ್ಷರಾದ ಸಿರಾಜ್ ಪಡಿಕ್ಕಲ್, ಸಿರಾಜ್ ಕಲ್ಲರ್ಬೆ ಕಾರ್ಯದರ್ಶಿ ಗಳಾದ ನಿಯಾಜ್ ಪಡಿಕ್ಕಲ್, ಸಿನಾನ್ ಸುಟ್ಟ, ಕ್ಯಾಂಪಸ್ ಕಾರ್ಯದರ್ಶಿ ಮುಸ್ತಾಫ ನಡುಪದವು ಮುಂತಾದವರು ಉಪಸ್ಥಿತರಿದ್ದರು. ಡಿವಿಷನ್ ಉಪಾಧ್ಯಕ್ಷರಾದ *ಫಾರೂಖ್ ಸಖಾಫಿ ಮದನಿನಗರ* ದುಆಃ ನೇತೃತ್ವ ನೀಡಿದರು,, ಸೆಕ್ಟರ್ ಅಧ್ಯಕ್ಷರಾದ *ಮನ್ಸೂರು ಹಿಮಮಿ* ಅಧ್ಯಕ್ಷತೆ ವಹಿಸಿದ್ದರು. ಸೆಕ್ಟರಿನ ಪ್ರ.ಕಾರ್ಯದರ್ಶಿ *ಇಲ್ಯಾಸ್ ಪೊಟ್ಟೊಳಿಕೆ* ಸ್ವಾಗತಿಸಿ, ಸೆಕ್ಟರ್ ಜೊತೆಕಾರ್ಯದರ್ಶಿ *ಶಂಶುದ್ದೀನ್ ಮೊಂಟೆಪದವು* ಕಾರ್ಯಕ್ರಮ ನಿರೂಪಿಸಿ ವಂದಿಸಿದ್ದರು. 🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱 🎥 *ಮೀಡಿಯಾ ಹಾಗೂ ಪಬ್ಲಿಕ್ ರಿಲೇಶನ್ ಸಮಿತಿ* 💐 *ಮೊಂಟುಗೋಳಿ ಸೆಕ್ಟರ್* 💐

No comments:

Post a Comment