Thursday, April 13, 2017

ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ರಜಬ್ ಸಂದೇಶ ಕಾರ್ಯಕ್ರಮ


ಕೈರಂಗಳ :  ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) *ಎಸ್ಸೆಸ್ಸೆಫ್  ಮೊಂಟುಗೋಳಿ ಸೆಕ್ಟರ್* ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ *ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖೆಯ* ವತಿಯಿಂದ 13/04/2017 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮಗ್ರಿಬ್  ನಮಾಜಿನ ಬಳಿಕ ಜಾಮಿಯಾ ಮಸ್ಜಿದುರ್ರಹ್ಮಾನ್ ಪಡಿಕ್ಕಲ್ ನಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ರಜಬ್ ಸಂದೇಶ ಕಾರ್ಯಕ್ರಮ ನಡೆಯಿತು.
ಎಸ್ ಎಂ ಎ  ಮೊಂಟುಗೋಳಿ ರೆಂಜ್ ಕಾರ್ಯದರ್ಶಿ, ಪಡಿಕ್ಕಲ್ ಜುಮಾ ಮಸೀದಿ ಇದರ ಖತೀಬರು ಆದ *ನಾಸಿರುದ್ದೀನ್ ಮದನಿ ಬಾಳೆಪುಣಿ*  ಉದ್ಬೋಧನೆಗೈದರು ಕಾರ್ಯಕ್ರಮದಲ್ಲಿ ಪಡಿಕ್ಕಲ್ ಜಮಾಅತಿನ ಗೌರವಾಧ್ಯಕ್ಷರಾದ ಪಿಪಿ ಇಸ್ಮಾಯಿಲ್ ಹಾಜಿ, ನಾಡಿನ ಹಿರಿಯ ವ್ಯಕ್ತಿ ಟಿಕೆ ಇಸ್ಮಾಯಿಲ್ಚ, ಎಸ್ ವೈ ಎಸ್ ಪಡಿಕ್ಕಲ್ ಉಪಾಧ್ಯಕ್ಷರಾದ ಅಬ್ಬಾಸ್ ಬರೆ, ಎಸ್ ವೈ ಎಸ್ ಪಡಿಕ್ಕಲ್ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಪಿಎಸ್, ಮೊಂಟುಗೋಳಿ ಸೆಕ್ಟರ್ ಜೊತೆ ಕಾರ್ಯದರ್ಶಿ , ಪಡಿಕ್ಕಲ್ ಶಾಖಾ ಪ್ರ.ಕಾರ್ಯದರ್ಶಿ ನಿಯಾಝ್ ಪಡಿಕ್ಕಲ್ ಮುಂತಾದವರು ಉಪಸ್ಥಿತರಿದ್ದರು.
💐💐💐💐💐💐💐💐💐💐

No comments:

Post a Comment