Thursday, March 2, 2017

ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್: ಟಾಪ್ 10 ಲೀಡರ್ಸ್ ಕ್ಯಾಂಪ್

ಮೋಂಟುಗೋಳಿ: ಎಸ್ಸೆಸ್ಸೆಫ್ ಮೋಂಟುಗೊಳಿ ಸೆಕ್ಟರ್ ವತಿಯಿಂದ ತ್ತಕ್ವಿಯ್ಯ ಸೆಕ್ಟರ್ ಅಧೀನದಲ್ಲಿರುವ ಶಾಖೆಯ ಆಯ್ದ 10 ನಾಯಕರ ಕ್ಯಾಂಪ್ ಇಂದು (ಮಾರ್ಚ್ 03, 2017)ಸಂಜೆ 6 ಗಂಟೆಗೆಮರಿಕ್ಕಲ ಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಲಿರುವುದು. ಪ್ರಸ್ತುತ ಕಾರ್ಯಕ್ರಮದ ಧ್ವಜಾರೋಹನವನ್ನು ಅಬ್ಬಾಸ್ ಸಖಾಫಿ ಮಡಿಕೇರಿ ನೆರವೇರಿಸಲಿದ್ದು, ಝೈನುಲ್ ಆಬಿದ್ ಸಖಾಫಿ ಕಬರ್ ಝಿಯಾರತ್ ಗೆ ನೇತೃತವನ್ನು ನಿಡಲಿದ್ದಾರೆ. ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷರಾದ ಮನ್ಸೂರ್ ಹಿಮಮಿವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸೆಕ್ಟರ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಸ್ವಾಗತ ಭಾಷಣವನ್ನು ಮಾಡಲಿದ್ದಾರೆ, ಸೆಕ್ಟರ್ ಉಪಾಧ್ಯಕ್ಷರಾದ ಸಿರಾಜ್ ಪಡಿಕ್ಕಲ್ ಖಿರಾಅತ್ ಪಟಿಸಲಿದ್ದಾರೆ. ಡಿವಿಶನ್ ಅಧಯಕ್ಷರಾದ ಮುನೀರ್ ಸಖಾಫಿ ಉದ್ಘಾಟನಾ ಭಾಷಣ ನಡೆಸಲಿರುವರು. ಸೆಕ್ಟರ್ ಉಸ್ತುವಾರಿ ಫಾರೂಖ್ ಸಖಾಫಿ ಮದನಿನಗರ ಇವರ ದುಆ ಮತ್ತು ನೇತೃತ್ವದಲ್ಲಿ ನಡೆಯಲಿದೆ. ಸಂಘಟನಾ ತರಗತಿ ಸುಲೈಮಾನ್ ಮುಸ್ಲಿಯಾರ್ ಕರಿವೆಳ್ಳೂರ್ ಮತ್ತು ಕೆಎಂ ಕಳತ್ತೂರ್ ನಡೆಸಲಿದ್ದಾರೆ. ಮುಖ್ಯ ಅತಿಥಿಯಾಗಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಶೆರೀಫ್ ಮುಡಿಪು ಮುಂತಾದವರು ಭಾಗವಹಿಸಲಿದ್ದಾರೆ.

No comments:

Post a Comment