Tuesday, September 19, 2017

ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಇಖ್ರಹ್ ಡೇ ಆಚರಣೆ

ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಇಖ್'ರಅ್ ಡೇ ಆಚರಣೆ:

ಕೈರಂಗಳ: ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಸೆಸ್ಸೆಫ್ ಪಡಿಕ್ಕಲ್ ಶಾಖಾ ವತಿಯಿಂದ ಪಡಿಕ್ಕಲ್ ಜುಮಾ ಮಸೀದಿ ವಠಾರದಲ್ಲಿ  ಇಖ್'ರಅ್ ಡೇ ಆಚರಿಸಲಾಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಉಸ್ತಾದರಾದ ನಾಸಿರುದ್ದೀನ್ ಮದನಿ ದುಹಾ ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಡಿಕ್ಕಲ್  ಜಮಾಅತ್ ಉಪಾಧ್ಯಕ್ಷರಾದ ಅಬ್ಬುಹಾಜಿ ಡಿಎಚ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಳೀಯ ಉಸ್ತಾದರಾದ ಎನ್ ಅಬೂಬಕ್ಕರ್ ಮದನಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್ಸೆಸ್ಸೆಫ್ ದಕ್ಷಿಣ ಜಿಲ್ಲಾ ಸಮಿತಿ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ವಿಶ್ವ ಸಾಕ್ಷರತಾ ದಿನದ ವಿಷಯವನ್ನು ಮಂಡಿಸಿದರು.
ವೇದಿಕೆಯಲ್ಲಿ ಸ್ಥಳೀಯ ಮುಹಝ್ಝಿನ್ ಅಬ್ದುಲ್ ಮಜೀದ್ ಮುಸ್ಲಿಯಾರ್, ಜಮಾಅತ್ ಗೌರವಾಧ್ಯಕ್ಷ ಪಿಪಿ ಇಸ್ಮಾಯಿಲ್ ಹಾಜಿ, SYS ಗೌರವಾಧ್ಯಕ್ಷ ಇಬ್ರಾಹಿಮ್ ಬಾವಾ ಹಾಜಿ, SYS ಅಧ್ಯಕ್ಷರಾದ ಟಿಕೆ ಇಸ್ಮಾಯಿಲ್ಚ ಹಾಗೂ ಕಾರ್ಯಕ್ರಮದಲ್ಲಿ ಜಮಾಅತಿನ ಹಿರಿಯ ವ್ಯಕ್ತಿಗಳು,ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಪಡಿಕ್ಕಲ್ ಶಾಖಾ ಉಪಾಧ್ಯಕ್ಷರಾದ ಸಿರಾಜ್ ಪಡಿಕ್ಕಲ್ ಸ್ವಾಗತಿಸಿ ವಂದಿಸಿದರು.



No comments:

Post a Comment