Saturday, February 3, 2018

ಕೈರಂಗಳ: ಎಸ್.ಎಸ್.ಎಫ್ ಡಿಜಿ ಕಟ್ಟೆ ಶಾಖೆ ವಾರ್ಷಿಕ ಮಹಾಸಭೆ.

*ಕೈರಂಗಳ:ಎಸ್.ಎಸ್.ಎಫ್ ಡಿ.ಜಿ ಕಟ್ಟೆ ಶಾಖೆ ವಾರ್ಷಿಕ ಮಹಾಸಭೆ*

ಫೆ,2,ಕೈರಂಗಳ:ಎಸ್.ಎಸ್.ಎಫ್ ಡಿಜಿ ಕಟ್ಟೆ ಕೈರಂಗಳ ಶಾಖೆಯ ವಾರ್ಷಿಕ ಮಹಾಸಭೆಯು "ಎಸ್.ಜೆ.ಎಂ ದ.ಕ ಜಿಲ್ಲಾಧ್ಯಕ್ಷ ಅಲ್ ಹಾಜ್ ಮುಹಿಯ್ಯದ್ದೀನ್ ಸಾದಿ  ತೋಟಾಲ್" ಇವರ ನೇತೃತ್ವದಲ್ಲಿ ಶಾಖಾಧ್ಯಕ್ಷರಾದ ಸಿನಾನ್ ಸುಟ್ಟ ರವರ ಅಧ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ವಿದ್ಯಾನಗರದಲ್ಲಿ ನಡೆಯಿತು.ಶಾಖಾ ಪ್ರಧಾನ ಕಾರ್ಯದರ್ಶಿ ಜಾಬೀರ್ ಟಿ ಸ್ವಾಗತಿಸಿದರು. ಸಭೆಯನ್ನು ಸೆಕ್ಟರ್ ಪ್ರ.ಕಾರ್ಯದರ್ಶಿ ಶಂಸುದ್ದೀನ್ ಮೊಂಟೆಪದವು ಉಧ್ಘಾಟಿಸಿದರು.ಎಸ್.ಎಸ್.ಎಫ್ ಮೋಂಟುಗೋಳಿ ಸೆಕ್ಟರ್  ಅದ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು ಸಂಘಟನಾ ತರಗತಿ ನಡೆಸಿದರು.

ಶಾಖಾ ಕಾರ್ಯದರ್ಶಿ ಜಾಬೀರ್.ಟಿ ವಾರ್ಷಿಕ ವರದಿ ಮಂಡಿಸಿ, ಕೋಶಾಧಿಕಾರಿ ಆಶೀಕ್ ವಿದ್ಯಾನಗರ ಲೆಕ್ಕ ಪತ್ರ ಮಂಡನೆ ಮಾಡಿದರು. ಬಳಿಕ ಮುಂದಿನ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು,
ಅಧ್ಯಕ್ಷರಾಗಿ ಮಹಮ್ಮದ್ ಸಿನಾನ್ ಸುಟ್ಟ, ಉಪಾಧ್ಯಕ್ಷರುಗಳಾಗಿ ರಝಾಕ್ ಸುಟ್ಟ ,ಮಹಮ್ಮದ್ ಜಾಬೀರ್ ಎ.ಪಿ, ಪ್ರಧಾನ ಕಾರ್ಯದರ್ಶಿಯಾಗಿ ಜಾಬಿರ್.ಟಿ,ಜೊ.ಕಾರ್ಯದರ್ಶಿಗಳಾಗಿ ಮಹಮ್ಮದ್ ಇಸ್ಮಾಯಿಲ್ , ಮಹಮ್ಮದ್ ಆಶೀಕ್.ಜಿ,ಕೋಶಾಧಿಕಾರಿಯಾಗಿ ಅಶ್ರಫ್ ಸುಟ್ಟ ಇವರನ್ನು ಆಯ್ಕೆ ಮಾಡಲಾಯಿತು.
ಉಪಸಮಿತಿಗಳಲ್ಲಿ  ಇಶಾರ &ರೀಡ್ ಪ್ಲಸ್ ಗೆ ಜುನೈದ್ ವಿದ್ಯಾನಗರ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮಹಮ್ಮದ್ ರಾಫಿ ತೋಟಾಲ್,SBS ಕನ್ವಿನರ್ ಸಕೀಬ್ ವಿದ್ಯಾನಗರ,ಹೈಸ್ಕೂಲ್ ಕನ್ವಿನರ್ ಮಹಮ್ಮದ್ ಅನ್ಸಾಪ್ ಹಾಗೂ 5 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಯ್ಕೆ ಮಾಡಲಾಯಿತು.

ನೂತನ ಸಾರಥಿಗಳಿಗೆ ತೋಟಾಲ್ ಮುಹಿಯ್ಯದ್ದೀನ್ ಸಅದಿ ಎಸ್.ಎಸ್.ಎಫ್ ನ ಪತಾಕೆ ನೀಡುವ ಮೂಲಕ ಶುಭಹಾರೈಸಿದರು.
ಚುನಾವಣಾ ವೀಕ್ಷಕರಾಗಿ ಇಲ್ಯಾಸ್ ಪೊಟ್ಟೊಳಿಕೆ ನಿರ್ವಹಿಸಿ,ಜಾಬಿರ್.ಟಿ ಧನ್ಯವಾದವಿತ್ತರು.



No comments:

Post a Comment