Tuesday, April 4, 2017

ಅಮಾಯಕ ಮುಸ್ಲಿಮರ ಮೇಲೆ ಪೊಲೀಸ್ ನಡೆಸಿದ ದೌರ್ಜನ್ಯ: ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಖಂಡನೆ

*ಅಮಾಯಕರ ಮುಸ್ಲಿಮರ ಮೇಲೆ* *ಪೊಲೀಸ್ ನಡೆಸಿದ ದೌರ್ಜನ್ಯ* *ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಖಂಡನೆ* *ಕೈರಂಗಳ;ವಳಿಯಲ್ಲಿ ನಿರಂತರ ಮುಸ್ಲಿಮರ ಮೇಲೆ ಅಗಾಗ ದೌರ್ಜನ್ಯ ಹಾಗೂ ಷಡ್ಯಂತರಗಳು ನಡೆಯುತ್ತಾ ಇದೆ* ಕೊಲೆಯತ್ನ ಪ್ರಕರಣವೊಂದರಲ್ಲಿ ಸಿಸಿಬಿ ಪೋಲೀಸರಿಂದ ಬಂಧನಕ್ಕೊಳಗಾದ ಖುರೈಶಿ ಎನ್ನುವ ಯುವಕನನ್ನು ವಿಚಾರಣೆಯ ನೆಪದಲ್ಲಿ ನಿರಂತರ ಒಂದು ವಾರಗಳ ಕಾಲ ಪೋಲೀಸರ ದೌರ್ಜನ್ಯದಿಂದ ತನ್ನ ಒಂದು ಕಿಡ್ನಿಯನ್ನು ಕಳೆದುಕೊಂಡು ಮತ್ತೊಂದು ಕಿಡ್ನಿಯು ನಿಷ್ಕ್ರಿ ಯಗೊಳ್ಳುವ ಮಟ್ಟಿಗೆ ಅಮಾನವೀಯವಾಗಿ ದೌರ್ಜನ್ಯ ನಡೆಸಿದ್ದು, ಇದರ ವಿರುದ್ಧ ನ್ಯಾಯಕ್ಕಾಗಿ ಕೆಲವು ಸಹೋದರರು ಇವತ್ತು ಪ್ರತಿಭಟನೆ ನಡೆಸುವಾಗ ಅವರ ವಿರುದ್ಧ ಪೋಲೀಸರು ಲಾಠಿ ಚಾರ್ಜಿನ ಮೂಲಕ ನಡೆಸಿದ ದುರ್ನಡತೆಯು ಖಂಡನಾರ್ಹ, *ತಪ್ಪು ಇದ್ದರೆ ಕಾನೂನು ಕ್ರಮ ಕೈ ಗೊಳ್ಳಲಿ ಯಾವುದೇ ಕಾರಣ ವಿಲ್ಲದ ದೌರ್ಜನ್ಯ ನಡೆಸುವುದು ಖಂಡನಾರ್ಹವಾಗಿದೆ* *ತಪ್ಪಿತಸ್ಥ ಪೊಲೀಸರ ಮೇಲೆ ಸೂಕ್ತ ಕ್ರಮ ಕೈ ಗೊಂಡು ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆ ನಡೆಯದಂತೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳಬೇಕು* *ಇಂತಹ ದೌರ್ಜನ್ಯವನ್ನು ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ತೀವ್ರವಾಗಿ ಖಂಡಿಸುತ್ತದೆ*

No comments:

Post a Comment